ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ರಿ)
ಮುಖಪುಟ
ಸಂಪರ್ಕಿಸಿ
ಮಾಹಿತಿ
ಕೆ. ಎನ್. ಎಂ. ಎನ್. ಕಾಲೇಜಿಗೆ ತಮ್ಮೆಲ್ಲರಿಗೆ ಸ್ವಾಗತ..
       ಶಿವಮೊಗ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅನೇಕ ಶಿಕ್ಷಣ ಪ್ರಿಯರು 1946ರಲ್ಲಿ ಆರಂಭಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಒಂದು ನೊಂದಾಯಿತ ಸಂಸ್ಥೆ. ಈ ಎಲ್ಲಾ ಮಹನೀಯರ ನಿಸ್ವಾರ್ಥ ಸೇವೆ ಹಾಗೂ ಮುಂದಾಲೋಚನೆಯ ಪರಿಣಾಮವೇ ಜಿಲ್ಲೆಯಲ್ಲಿ ನಡೆದ ಮೊದಲ ಶೈಕ್ಷಣಿಕ ಹೆಜ್ಜೆ ಎನ್ನಬಹುದು. ಶಿಕ್ಷಣ ಕ್ಷೇತ್ರಕ್ಕೆ ಇವರೆಲ್ಲರ ಸೇವೆ ಹಾಗೂ ಕೊಡುಗೆ ಅದ್ವಿತೀಯವಾದುದು. ರಾಷ್ಟ್ರೀಯ ಶಿಕ್ಷಣ ಸಮಿತಿಯು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಿಳಾ ಸಶಕ್ತೀಕರಣಕ್ಕೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ. ಇವರ ಫಲವಾಗಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಆರಂಭವಾದ ಮಹಿಳಾ ಪದವಿ ಕಾಲೇಜು - ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಾಗಿ ಹೊರಹೊಮ್ಮಿದೆ.
ಇತ್ತೀಚಿನವರೆಗೂ ಶಿವಮೊಗ್ಗ ಜಿಲ್ಲೆಯ ಏಕೈಕ ಮಹಿಳಾ ಕಾಲೇಜು ಎನ್ನುವುದು ಪ್ರತಿಷ್ಠೆಯ ವಿಷಯವಾಗಿದೆ. 1965ರಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಶ್ರೀ. ಲಾಲ್‍ಬಹದ್ಧೂರ್ ಶಾಸ್ತ್ರಿಯವರು ಶಂಕುಸ್ಥಾಪನೆ ಮಾಡಿದ ಈ ಕಾಲೇಜು 1975ರಲ್ಲಿ ತನ್ನದೇ ಸ್ವಂತ ಕಟ್ಟಡದೊಂದಿಗೆ ರಾಷ್ಟ್ರಕವಿ ಕುವೆಂಪು ಅವರಿಂದ ಮುಂದುವರೆಯಿತು. ಕೇವಲ 32 ವಿದ್ಯಾರ್ಥಿನಿಯರಿಂದ ಆರಂಭವಾದ ಈ ಕಾಲೇಜು ಪ್ರಸ್ತುತ 1200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಗಿರುವ ಈ ಕಾಲೇಜು ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ವಿದ್ಯಾರ್ಥಿನಿಯರಿಗೆ ಪದವಿ ಶಿಕ್ಷಣವನ್ನು ನೀಡುತ್ತಾ ಬಂದಿದೆ.

ಓರ್ವ ಬಾಲಕನಿಗೆ ಶಿಕ್ಷಣ ನೀಡಿದರೆ ಅದು ಕೇವಲ ಓರ್ವ ವ್ಯಕ್ತಿಗೆ ಶಿಕ್ಷಣ ನೀಡಿದಂತೆ ಆಗುತ್ತದೆ. ಆದರೆ ಓರ್ವ ಬಾಲಕಿಗೆ ಶಿಕ್ಷಣ ನೀಡಿದರೆ ಅದು ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಆಗುತ್ತದೆ. ಶೈಕ್ಷಣಿಕ ವಲಯದಲ್ಲಿ ಆರಂಭದ ದಿನಗಳಿಂದಲೂ ತನ್ನದೇ ದಾಖಲೆಗಳನ್ನು ಸೃಷ್ಠಿಸುತ್ತಾ ಬಂದಿರುವ ಈ ಕಾಲೇಜು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತನ್ನದೇ ಛಾಪÀನ್ನು ಮೂಡಿಸುತ್ತ ಬಂದಿದೆ. ವಿದ್ಯಾರ್ಥಿ ಕೇಂದ್ರಿತ ಆನೇಕ ಕಾರ್ಯಾಗಾರಗಳು, ಉಪನ್ಯಾಸಗಳು, ವ್ಯಕ್ತಿತ್ವ ವಿಕಸನ, ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳು ಮುಂತಾದ ಆನೇಕ ಕಾರ್ಯಕ್ರಮಗಳನ್ನು ಸತತವಾಗಿ ನಡೆಸುತ್ತಾ ಬರಲಾಗುತ್ತಿದೆ. ಬಹುಬೇಡಿಕೆಯ ಉದ್ಯೋಗ, ತರಬೇತಿ ಕೋರ್ಸ್‍ಗಳು ಕೂಡ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲದೆ ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಹಾಗೂ ಬಹು ಬೇಡಿಕೆಯ ಐಚ್ಛಿಕ ಇಂಗ್ಲೀಷ್ ವಿಷಯವನ್ನು ಕೂಡ 2005ರಲ್ಲಿ ಆರಂಭಿಸಲಾಗಿದೆ.
ತ್ವರಿತ ಲಿಂಕ್‍ಗಳು
ಧೈಯೋದ್ದೇಶಗಳು
ಕಾರ್ಯಕಾರಿ ಸಮಿತಿ
ಕೆ.ಎನ್.ಎಂ.ಎನ್.ಸಿ- ಒಂದು ನೋಟ
ಕಾಲೇಜು ವಾರ್ತೆ
ಶಿಸ್ತಿನ ನಿಯಮಗಳು
ಕಾಲೇಜಿನ ವಿವಿಧ ಸಮಿತಿಗಳು
ವಿಧ್ಯಾರ್ಥಿಗಳಿಗಾಗಿ

ಹಕ್ಕು ನಿರಾಕರಣೆ   |  ಗೌಪ್ಯತಾ ನೀತಿ   |  ಎಫ್. ಎ. ಕ್ಯೂ   |  ಜಾಲಪಟ   |  ಡೌನ್ಲೋಡ್‍ಗಳು   |  ಸಂಪರ್ಕಿಸಿ
ನಮ್ಮನ್ನು ತಲುಪಲು
ಕೃತಿಸ್ವಾಮ್ಯ © ಕೆ.ಎನ್.ಎಂ.ಎನ್.ಸಿ
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು