ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ರಿ)
ಮುಖಪುಟ
ಸಂಪರ್ಕಿಸಿ
ಮಾಹಿತಿ
ಪ್ರಾಂಶುಪಾಲರ ನುಡಿ
         ಆತ್ಮೀಯ ಆಕಾಂಕ್ಷಿಗಳೇ,.

ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯು 1965ರಲ್ಲಿ ವಿದ್ಯಾರ್ಥಿನಿಯರಿಗಾಗಿ ಆರಂಭಿಸಿರುವ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿಗೆ ತಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ. ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ಪದವಿಗಳಲ್ಲದೇ ವೃತ್ತಿಪರ ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಯ ಮನೋಭಾವನೆಯನ್ನು ರೂಪಿಸಲಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಹಿರಿಯ ವಿದ್ಯಾರ್ಥಿಗಳು ಬದುಕಿನ ವಿವಿಧ ರಂಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತ ಕುಟುಂಬ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿಯೇ ಆರಂಭವಾದ ಪ್ರಪ್ರಥಮ ಕಾಲೇಜು ನಮ್ಮದು. ಪಾಠಪ್ರವಚನಗಳಲ್ಲದೇ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವದ್ಧಾರಿ ಹಾಗೂ ಜೀವನ ಮೌಲ್ಯಗಳ ಅರಿವು ಮೂಡಿಸಲು ಆಪ್ತಸಮಾಲೋಚನೆ, ಉದ್ಯೋಗ ಮಾಹಿತಿ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಈ ಮೂಲಕ ಆರ್ಥಿಕವಾಗಿ, ಸಾಂಸ್ಕøತಿಕವಾಗಿ ಸಬಲರಾಗುವ ನಮ್ಮ ವಿದ್ಯಾರ್ಥಿನಿಯರು ಪುರುಷ ಸಮಾಜದೊಂದಿಗೆ ಸವiನವಾಗಿ ದುಡಿಯುತ್ತಿದ್ದಾರೆ .

ಕಾಲೇಜಿನಲ್ಲಿ ನುರಿತ ಪ್ರಾಧ್ಯಾಪಕರು, ಸುಸಜ್ಜಿತ ಕಟ್ಟಡ, ಗ್ರಂಥಾಲಯ, ವಿಶ್ರಾಂತಿ ಕೊಠಡಿ, ಗಣಕಯಂತ್ರಗಳ ಪ್ರಯೋಗಾಲಯ, ಉಪಹಾರ ಮಂದಿರ ಹಾಗೂ ವ್ಯಾಯಾಮ ಶಾಲೆಗಳನ್ನು ಒದಗಿಸಲಾಗಿದೆ. ನಿರಂತರವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವ ನಮ್ಮ ಕಾಲೇಜಿಗೆ ನ್ಯಾಕ್ ಸಂಸ್ಥೆಯಿಂದ ‘ಬಿ’ ಗ್ರೇಡ್ ಪ್ರಮಾಣ ಪತ್ರ ದೊರೆತಿರುತ್ತದೆ. ನಮ್ಮ ಉದ್ದೇಶ ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ನೀಡುವುದು ಹಾಗೂ ಆ ಮೂಲಕ ವಿದ್ಯಾರ್ಥಿನಿಯರು ಇತರರಿಗೆ ಶಿಕ್ಷಣ ನೀಡಬಲ್ಲರು. ಹಾಗೂ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಬಲ್ಲರು. ನಿಗದಿತ ದಿನಾಂಕಕ್ಕೆ ಮುಂಚೆಯೇ ಅರ್ಜಿಯನ್ನು ತುಂಬಿಸಿ ಕಛೇರಿಗೆ ನೀಡಿ ಅಥವಾ ಹಿಂದಿರುಗಿಸಿ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ಪ್ರತ್ಯೇಕ ಅರ್ಜಿಗಳನ್ನು ನೀಡಬೇಕು ಎಂಬ ವಿಚಾರವನ್ನು ಗಮನಿಸುವುದು. ವಿದ್ಯಾರ್ಥಿನಿಯರಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಶಿಕ್ಷಣ ಪಡೆದ ನಮ್ಮ ವಿದ್ಯಾರ್ಥಿನಿಯರು ಇತರರಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುತ್ತಾರೆ.


Dr. H. S. Nagabhushan
ಪ್ರಾಂಶುಪಾಲರು

ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು,
ಕೆ.ಟಿ.ಶಾಮಣ್ಣ ಗೌಡ ರಸ್ತೆ, ಶಿವಮೊಗ್ಗ. - 577 201. ಕರ್ನಾಟಕ.
ತ್ವರಿತ ಲಿಂಕ್‍ಗಳು
ಧೈಯೋದ್ದೇಶಗಳು
ಕಾರ್ಯಕಾರಿ ಸಮಿತಿ
ಕೆ.ಎನ್.ಎಂ.ಎನ್.ಸಿ- ಒಂದು ನೋಟ
ಕಾಲೇಜು ವಾರ್ತೆ
ಶಿಸ್ತಿನ ನಿಯಮಗಳು
ಕಾಲೇಜಿನ ವಿವಿಧ ಸಮಿತಿಗಳು
ವಿಧ್ಯಾರ್ಥಿಗಳಿಗಾಗಿ

ಹಕ್ಕು ನಿರಾಕರಣೆ   |  ಗೌಪ್ಯತಾ ನೀತಿ   |  ಎಫ್. ಎ. ಕ್ಯೂ   |  ಜಾಲಪಟ   |  ಡೌನ್ಲೋಡ್‍ಗಳು   |  ಸಂಪರ್ಕಿಸಿ
ನಮ್ಮನ್ನು ತಲುಪಲು
ಕೃತಿಸ್ವಾಮ್ಯ © ಕೆ.ಎನ್.ಎಂ.ಎನ್.ಸಿ
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು