ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ರಿ)
ಮಾಹಿತಿ
ಕೆ. ಎನ್. ಎಂ. ಎನ್. ಕಾಲೇಜಿಗೆ ತಮ್ಮೆಲ್ಲರಿಗೆ ಸ್ವಾಗತ..
       ಶಿವಮೊಗ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅನೇಕ ಶಿಕ್ಷಣ ಪ್ರಿಯರು 1946ರಲ್ಲಿ ಆರಂಭಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಒಂದು ನೊಂದಾಯಿತ ಸಂಸ್ಥೆ. ಈ ಎಲ್ಲಾ ಮಹನೀಯರ ನಿಸ್ವಾರ್ಥ ಸೇವೆ ಹಾಗೂ ಮುಂದಾಲೋಚನೆಯ ಪರಿಣಾಮವೇ ಜಿಲ್ಲೆಯಲ್ಲಿ ನಡೆದ ಮೊದಲ ಶೈಕ್ಷಣಿಕ ಹೆಜ್ಜೆ ಎನ್ನಬಹುದು. ಶಿಕ್ಷಣ ಕ್ಷೇತ್ರಕ್ಕೆ ಇವರೆಲ್ಲರ ಸೇವೆ ಹಾಗೂ ಕೊಡುಗೆ ಅದ್ವಿತೀಯವಾದುದು. ರಾಷ್ಟ್ರೀಯ ಶಿಕ್ಷಣ ಸಮಿತಿಯು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಿಳಾ ಸಶಕ್ತೀಕರಣಕ್ಕೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ. ಇವರ ಫಲವಾಗಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಆರಂಭವಾದ ಮಹಿಳಾ ಪದವಿ ಕಾಲೇಜು ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಾಗಿ ಹೊರಹೊಮ್ಮಿದೆ.
ಇತ್ತೀಚಿನವರೆಗೂ ಶಿವಮೊಗ್ಗ ಜಿಲ್ಲೆಯ ಏಕೈಕ ಮಹಿಳಾ ಕಾಲೇಜು ಎನ್ನುವುದು ಪ್ರತಿಷ್ಠೆಯ ವಿಷಯವಾಗಿದೆ. 1965ರಲ್ಲಿ ಅಂದಿನ ಪ್ರಧಾನಿಗಳಾಗಿದ್ದ ಶ್ರೀ. ಲಾಲ್‍ಬಹದ್ಧೂರ್ ಶಾಸ್ತ್ರಿಯವರು ಶಂಕುಸ್ಥಾಪನೆ ಮಾಡಿದ ಈ ಕಾಲೇಜು 1975ರಲ್ಲಿ ತನ್ನದೇ ಸ್ವಂತ ಕಟ್ಟಡದೊಂದಿಗೆ ರಾಷ್ಟ್ರಕವಿ ಕುವೆಂಪು ಅವರಿಂದ ಮುಂದುವರೆಯಿತು ...
ಪ್ರಾಂಶುಪಾಲರ ನುಡಿ
ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯು 1965ರಲ್ಲಿ ವಿದ್ಯಾರ್ಥಿನಿಯರಿಗಾಗಿ ಆರಂಭಿಸಿರುವ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿಗೆ ತಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ. ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ಪದವಿಗಳಲ್ಲದೇ ವೃತ್ತಿಪರ ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಯ ಮನೋಭಾವನೆಯನ್ನು ರೂಪಿಸಲಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಹಿರಿಯ ವಿದ್ಯಾರ್ಥಿಗಳು ಬದುಕಿನ ವಿವಿಧ ರಂಗಗಳಲ್ಲಿ ...
ಪ್ರಾಂಶುಪಾಲರ ಕಾರ್ಯಾಲಯ
ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು, ಕೆ.ಟಿ.ಶಾಮಣ್ಣ ಗೌಡ ರಸ್ತೆ, ಶಿವಮೊಗ್ಗ. - 577 201. ಕರ್ನಾಟಕ.
Phone : + 91 - 8182 - 272164
E-mail : knmnc1@gmail.com
ತ್ವರಿತ ಲಿಂಕ್‍ಗಳು
ನಮ್ಮನ್ನು ಸಂಪರ್ಕಿಸಿ

ಕೃತಿಸ್ವಾಮ್ಯ © ಕೆ.ಎನ್.ಎಂ.ಎನ್.ಸಿ
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು