ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ರಿ)
ಮುಖಪುಟ
ಸಂಪರ್ಕಿಸಿ
ಮಾಹಿತಿ
ಕಾಲೇಜಿನ ಧ್ಯೇಯೋದ್ದೇಶಗಳು
ಜಿಲ್ಲೆಯ ಪ್ರಪ್ರಥಮ ಮಹಿಳಾ ಕಾಲೇಜಾಗಿದ್ದು ಮಹಿಳಾ ಸಬಲೀಕರಣ ಹಾಗೂ ಲಿಂಗ ತಾರತಮ್ಯಗಳಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಒತ್ತು ಕೊಟ್ಟು ಕಾಲೇಜು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.

ವಿಷನ್:-
ತಾಂತ್ರಿಕವಾಗಿ ಅತ್ಯಂತ ವೇಗವಾಗಿ ದಿನೇ ದಿನೇ ಬದಲಾಗುತ್ತಿರುವ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಆಗುಹೋಗುಗಳ ಬಗ್ಗೆ ಅರಿವು ಮೂಡಿಸುವುದು.
ವೈಚಾರಿಕತೆ ಹಾಗೂ ಸೃಜನಶೀಲತೆ ಬಗ್ಗೆ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಉದ್ಯಮ ಶೀಲರನ್ನಾಗಿಸುವುದು.
ನೈತಿಕ, ಆಧ್ಯಾತ್ಮ ಹಾಗೂ ಸಂಸ್ಕøತಿ ಆಧಾರಿತ ಮೌಲ್ಯ ಶಿಕ್ಷಣವನ್ನು ನೀಡಿ ಕುಟುಂಬ ವ್ಯವಸ್ಥೆಯನ್ನು ರೂಪುಗೊಳಿಸುವುದು. ಈ ಮೂಲಕ ದೇಶವನ್ನು ಸದೃಢಗೊಳಿಸುವುದು.
ಒಂದು ಸಮಷ್ಠಿ ಪ್ರಜ್ಞೆಯೊಂದಿಗೆ ಜವಾಬ್ಧಾರಿಯುತ ನಾಗರಿಕರನ್ನಾಗಿಸುವುದು.
ಮಹಿಳೆಯರಿಗೆ ಶಿಕ್ಷಣ ನೀಡುವುದರಲ್ಲಿ ಕಾಲೇಜು ಎಂದಿಗೂ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವುದು.
ಮಿಷನ್:-
ಮೇಲ್ಕಂಡ ವಿಷನ್ ಅನ್ನು ಸಾಧಿಸಲು ಕಾಲೇಜಿನ ಮಿಷನ್ ಈ ಕೆಳಗಿನಂತಿದೆ.
ಸಾಮರ್ಥ್ಯ ಹಾಗೂ ಸದ್ಗುಣಗಳನ್ನು ಒಗ್ಗೂಡಿಸುವುದು.
ಕೌಶಲ್ಯ ಹಾಗೂ ಬುದ್ಧಿಮತ್ತೆಯನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಅಣಿಗೊಳಿಸಿ ದೇಶದ ಪ್ರಗತಿಗೆ ಸಹಕಾರಿಯಾಗುವುದು.
ಶೈಕ್ಷಣಿಕ ಸಂಶೋಧನ ವಾತಾವರಣವನ್ನು ಸೃಷ್ಟಿಸಿ ಶ್ರೇಷ್ಠತೆಯನ್ನು ಸಾಧಿಸುವುದು.
ಬಲಿಷ್ಠ ಹಾಗೂ ಕ್ರಿಯಾತ್ಮಕ ನಾಯಕತ್ವವನ್ನು ಬೆಳಸಿಕೊಳ್ಳಲು ಸಹಕಾರಿಯಾಗುವುದು.
ಹೊಸತನ, ಸೃಜನಶೀಲತೆ, ಕೌಶಲ್ಯ ಹಾಗೂ ತಂಡದಲ್ಲಿ ಎಲ್ಲರೊಡನೆ ಸಹಕರಿಸುವ ಮನೋಭಾವನೆಯನ್ನು ಸೃಷ್ಠಿ ಮಾಡುವುದು.
ಔದ್ಯೋಗಿಕ ಅರಿವು ಹಾಗೂ ಅವಕಾಶಗಳನ್ನು ಪೂರೈಸುವುದು.
ಸಾಂಪ್ರದಾಯಿಕ ಹಾಗೂ ಆಧುನಿಕತೆಯ ಬೋಧನ ತಂತ್ರಗಳನ್ನು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೊಂದಿಗೆ ರೂಪಿಸುವುದು..
ಶಾಶ್ವತ ಮೌಲ್ಯಗಳಿಂದ ಶಿಸ್ತು, ನಾಯಕತ್ವ, ವೈಜ್ಞಾನಿಕ ಮನೋಭಾವಗಳ ಬಗ್ಗೆ ವಿವಿಧ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು. ಅಲ್ಲದೆ ವಿಶಿಷ್ಟ ವಿಚಾರ ಅಥವಾ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು.
ಶಾಶ್ವತ ಮೌಲ್ಯಗಳಿಂದ ಶಿಸ್ತು, ನಾಯಕತ್ವಕಾಲೇಜಿನ ಉದ್ಯೋಗ ಮಾಹಿತಿ ಕೇಂದ್ರದ ಮೂಲಕ ವ್ಯಕ್ತಿತ್ವ ವಿಕಸನ ಕಾರ್ಯಗಾರಗಳನ್ನು ನಡೆಸುವುದು. ರೋಟರಿ ಸಂಸ್ಥೆ ಹಾಗೂ ವಿವಿಧ ಕಂಪನಿಗಳ ಜೊತೆಗೂಡಿ ಔದ್ಯೋಗಿಕ ಅವಕಾಶಗಳ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುವುದು..
ಶೈಕ್ಷಣಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆಗೆ ಅವಕಾಶಗಳನ್ನು ಒದಗಿಸುವುದು..
ಪ್ರತಿ ತರಗತಿಗೂ ಉಪನ್ಯಾಸಕರನ್ನು ವಿದ್ಯಾರ್ಥಿ ಸಲಹೆಗಾರರನ್ನಾಗಿ ನೇಮಿಸಿ ವಿದ್ಯಾರ್ಥಿಗಳ ಹಾಜರಾತಿ, ಆಸಕ್ತಿ, ಪ್ರತಿಭೆ ಹಾಗೂ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವುದು..
ಪಠ್ಯ ಪೂರಕ ಚಟುವಟಿಕೆಗಳಾದ ಎನ್.ಎಸ್.ಎಸ್, ಎನ್.ಸಿ.ಸಿ, ರೋಟ್ರ್ಯಾಕ್ಟ್ ಹಾಗೂ ಕಾಲೇಜಿನ ಇನ್ನಿತರ ಸಂಘಗಳ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರನ್ನು ತೊಡಗಿಸಿಕೊಳ್ಳುವುದು..
ಕಾಲೇಜಿಗೆ ವಿಷನ್ ಮತ್ತು ಮಿಷನಗಳ ಅಡಿಯಲ್ಲಿ ರೂಪಿಸಲ್ಪಡುವ ಆನೇಕ ಕಾರ್ಯಕ್ರಮಗಳ ಬಗ್ಗೆ ಈ ಕೆಳಕಂಡ ರೀತಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು.
ಕಾಲೇಜಿನ ಪ್ರವೇಶದ್ವಾರದಲ್ಲಿ ಹಾಗೂ ಗ್ರಂಥಾಲಯದಲ್ಲಿ ಈ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿವರಗಳನ್ನು ಪ್ರದರ್ಶಿಸುವುದು.
ಕಾಲೇಜಿನ ಗೋಡೆ, ಪತ್ರಿಕೆಗಳು ಹಾಗೂ ಕಾಲೇಜಿನ ವಾರ್ಷಿಕ ಸಂಚಿಕೆಗಳ ಮೂಲಕ ಅರಿವು ಮೂಡಿಸುವುದು.
ಅವಕಾಶಗಳು ಇರುವ ಕಡೆ ಕರಪತ್ರಗಳ ಮೂಲಕ ವಿಷಯವನ್ನು ತಿಳಿಸುವುದು.
ಅಂತರ್ಜಾಲದ ಮೂಲಕ ವಿವರಗಳನ್ನು ನೀಡುವುದು.
ವಿದ್ಯಾರ್ಥಿಗಳಲ್ಲಿ ಪರಸ್ಪರ ವಿಚಾರ ವಿನಿಮಯಗಳ ಮೂಲಕ ಹಾಗೂ ಪ್ರಶಿಕ್ಷಿಣದ ಮೂಲಕ ಅರಿವು ಮೂಡಿಸುವುದು.
ತ್ವರಿತ ಲಿಂಕ್‍ಗಳು
ಧೈಯೋದ್ದೇಶಗಳು
ಕಾರ್ಯಕಾರಿ ಸಮಿತಿ
ಕೆ.ಎನ್.ಎಂ.ಎನ್.ಸಿ- ಒಂದು ನೋಟ
ಕಾಲೇಜು ವಾರ್ತೆ
ಶಿಸ್ತಿನ ನಿಯಮಗಳು
ಕಾಲೇಜಿನ ವಿವಿಧ ಸಮಿತಿಗಳು
ವಿಧ್ಯಾರ್ಥಿಗಳಿಗಾಗಿ

ಹಕ್ಕು ನಿರಾಕರಣೆ   |  ಗೌಪ್ಯತಾ ನೀತಿ   |  ಎಫ್. ಎ. ಕ್ಯೂ   |  ಜಾಲಪಟ   |  ಡೌನ್ಲೋಡ್‍ಗಳು   |  ಸಂಪರ್ಕಿಸಿ
ನಮ್ಮನ್ನು ತಲುಪಲು  
ಕೃತಿಸ್ವಾಮ್ಯ © ಕೆ.ಎನ್.ಎಂ.ಎನ್.ಸಿ
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು